Kannada Proverb Janapada Gadegalu ಕನ್ನಡಗಾದೆ

Kannada Proverb Janapada Gadegalu ಕನ್ನಡಗಾದೆ

Below are some of the Kannada Proverb for you to read and rejoice

ವೇದ ಸುಳ್ಳಾದರು ಗಾದೆ ಸುಳ್ಳಾಗದು.

ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು

ಅತಿಯಾಸೆ ಗತಿಗೇಡು

ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ

ಮಾಡೋದು ಅನಾಚಾರ ಮನೆಮುಂದೆ ಬೃಂದಾವನ

ಉತ್ತರ ಕುಮಾರನ ಪೌರುಷ ಒಲೆ ಮುಂದೆ!

ಅತ್ತೂ ಕರೆದೂ ಆರತಿ ಮಾಡಿಸಿ ಕೊಂಡರಂತೆ

ಹಲ್ಲಿದ್ದಾಗ ಕಡಲೆಯಿಲ್ಲ ಕಡಲೆಯಿದ್ದಾಗ ಹಲ್ಲಿಲ್ಲ

ಓತಿಕಾಟಕ್ಕೆ ಬೇಲೀಗೂಟ ಸಾಕ್ಷಿ!

ಹೊಳೆಗೆ ಸುರಿದರೂ ಅಳೆದು ಸುರಿಯಬೇಕು,

ಕೈ ಕೆಸರಾದರೆ ಬಾಯಿ ಮೊಸರು.

ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು

ದೂರದ ಬೆಟ್ಟ ನುಣ್ಣಗೆ.

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ.

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.

ಜಟ್ಟಿ ಅಡಿಗೆ ಬಿದ್ದರೂ ಮೂಗು ಮೇಲಿದೆ ಅಂದ.

ಮಾಡಿದ್ದುಣ್ಣೋ ಮಹಾರಾಯ.

ಹುಟ್ಟು ಗುಣ ಸುಟ್ಟರೂ ಹೊಗೋದಿಲ್ಲ

ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ

ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ

ಉಂಡ್ ಹೊಟ್ಟೆಗೆ ಇಟ್ ಇಕ್ ಬ್ಯಾಡ

ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು.

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.

ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ

ಅಕ್ಕರೆಯಿದ್ದಲ್ಲಿ ದುಃಖವುಂಟು

ಗಂಡ-ಹೆಂಡಿರ ಜಗಳ ತಿಂದು/ಉಂಡು ಮಲುಗೊವರೆಗೆ

ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ

ಅತಿ ಸ್ನೇಹ ಗತಿ ಕೇಡು

ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ

ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ.

ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ

ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ

ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ

ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ

ನಾಯಿನ ಕರೆದುಕೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದ ಹಾಗಾಯ್ತು

ಹುತ್ತ ಬಡಿದರೆ ಹಾವು ಸಾಯುವುದೇ

ಆನೆಯ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ

ನಾಯಿ ಬಾಲ ಡೊಂಕು

ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?

ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.

ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದಂಗೆ

ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.

ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ

ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ

ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು

ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ

ಹಸಿದು ಹಲಸು, ಉಂಡು ಮಾವು

ಬೆಂಡೇಕಾಯಿ ತಿಂದ್ರೆ ಬುದ್ದಿ ಬರ್ತದೆ

ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ

ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ

ಬಡವನ ಹೆಂಡತಿ ಊರಿಗೆಲ್ಲ ಅತ್ತಿಗೆ

ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.

ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ

ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು

ಸಾವಿರ ಕೊಟ್ಟರೂ ಸವತಿ ಮನೆ ಬೇಡ

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.

ಹೆಣ್ಣು ಹಡೆದವರ ಮನೆ ನುಣ್ಣಗೆ ಗಂಡು ಹಡೆದವರ ಮನೆ ತಣ್ಣಗೆ

ಹೆಣ್ಣಿನ ಬಾಳು ಕಣ್ಣೀರಿನ ಗೋಳು

ಕನಸಲ್ಲಿ ತಾಳಿಕಟ್ಟಿ ಬೆಳಗಾದ್ಮೇಲೆ ಹೆಂಡತಿ ಹುಡುಕಿದನಂತೆ

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು

ಮನೆ ಕಟ್ಟಿನೋಡು ಮದುವೆ ಮಡಿನೋಡು ನೋಡು

ಮುತ್ತು ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ಕೊಟ್ರಂತೆ.

ಕಾಲಿಗ್ ಬಿದ್ದು ಕಾಲುಂಗ್ರ ಬಿಚ್ಕೊಂಡ್ರಂತೆ

ತಾಳಿಗೆ ಬೆಲೆ ಕೊಟ್ಟವಳು ಗಂಡನಿಗೂ ಬೆಲೆ ಕೊಡ್ತಾಳೆ.

ಉಂಡ ಮನೆ ಜಂತೆ ಎಣಿಸಬಾರದು

ಶಂಖದಿಂದ ಬಂದರೇನೆ ತೀರ್ಥ!

ಊಟ ತನ್ನಿಚ್ಚೆ, ನೋಟ ಪರರಿಚ್ಚೆ

ಮನೆಗೆ ಮಾರಿ ಊರಿಗೆ ಉಪಕಾರ

ಕುಣಿಲಾರದವಳು ನೆಲ ಡೊಂಕು ಅಂದಳಂತೆ.

ಎತ್ತು ಏರಿಗೆ ಕೋಣ ನೀರಿಗೆ

ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು

ತಾಳವಿಲ್ಲ ತಂತಿ ಇಲ್ಲ!

ಹಾಳು ಬಾವಿ ಹರುಕು ಹಗ್ಗ!

ಸಂಕಟ ಬಂದಾಗ ವೆಂಕಟರಮಣ

ನುಡಿದಂತೆ ನಡೆಯಬೇಕು ಆದರೆ ಕುಡಿದಂತೆ ನಡೆಯಬಾರದು

ಸಗಣಿ ಜತೆ ಸರಸಕ್ಕಿಂತ ಗಂಧದ ಜತೆ ಗುದ್ದಾಟ ಲೇಸು / ಸಗಣಿಯವನ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು.

ಕಲಿಯೋ ತನಕ ಬ್ರಹ್ಮ ವಿದ್ಯೆ, ಕಲಿತ ಮೇಲೆ ಕೋತಿ ವಿದ್ಯೆ.

ನೂಲಿನಂತೆ ಸೀರೆ, ತಾಯಿಯಂತೆ ಮಗಳು

ರಾಗಿ ತಿಂದವ ಯೋಗಿ, ಮ್ಯಾಗಿ ತಿಂದವ ರೋಗಿ

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು

ಮಾತು ಚಿಕ್ಕದಾಗಿರಲಿ, ಕೆಲಸ ಚೊಕ್ಕವಾಗಿರಲಿ.

ಸುಂಕದವನ ಹತ್ತಿರ ಸುಖ ದುಖಃ ಹೇಳಿದ ಹಾಗೆ!

ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು

ಕಣ್ಣಿ ಅದಾ ಅಂತ ಎಮ್ಮಿ ತೊಗೊಂಡಿದ್ರಂತ

ಆಕೆಗೆ ಬುದ್ಧಿ ಹೇಳಕ್ಕೆ ಆತನ್ನ ಕರೆಸಿದರೆ, ಆತ ಹೆಂಡ್ತಿನ ಬಿಟ್ಟು ಆರು ವರ್ಷ ಆಗಿತ್ತಂತೆ.

ನೊಂದ್ಕೊಂಡು ಬದುಕಬಾಡ್ದು ಮಗ, ಹೊಂದ್ಕೊಂಡು ಬದುಕಬೇಕು.

ಕೊಂಕಳಲ್ಲಿ ಕೂಸು ಮಡಗಿಕೊಂಡು‌ ಊರೆಲ್ಲ ಹುಡುಕಿದರಂತೆ.

ಕೊಟ್ಟೋನು ಕೋಡಂಗಿ ಈಸುಕೊಂಡವನು ಈರಬದ್ರ

ತಣ್ಣೀರಾದರೂ ತಣಿಸಿ ಕುಡಿ!

ಮೋಸ ಮಾಡಿದವನ ಹೆಸರು ಮಗನಿಗೆ ಇಡು!

ಏನೇ ಆದರೂ ಕುಂತಿ ಮಕ್ಕಳಿಗೆ ವನವಾಸ ತಪ್ಪಿದ್ದಲ್ಲ!

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ!

ತಿನ್ನೋದು ಊರ್ ಗಾತ್ರ, ಮುರಿಯೋದು ಗುಲ್ಗಂಜಿ ಗಾತ್ರ!

ಮಾಡಿದವರ ಪಾಪ ಆಡಿದವರ ಬಾಯಲ್ಲಿ

ವಿನಾಶಕಾಲೇ ವಿಪರೀತ ಬುದ್ಧಿ

ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದಂತೆ

 

Post a Comment

0 Comments